telugu poem : Renuka Ayola
kannada translation : S D Kumar
ತೆಲುಗು : ರೇಣುಕಾ ಅಯೋಲ
ಕನ್ನಡಕ್ಕೆ : ಎಸ್ ಡಿ ಕುಮಾರ್
ಟೀ ಕಪ್ ಡೈರೀ..
ಬೆಳಗ್ಗೆ : 6 ಗಂಟೆ
ಗದರಿಕೊಂಡಿತು ರಾತ್ರಿಯ
ಆರೋಗ್ಯ ಸೂತ್ರ
ಕಪ್ಪು ಬಿಳುಪು ಸೊನ್ನೆಗಳಿರುವ
ಮಗ್ ನಲ್ಲಿ
ಗ್ರೀನ್ ಟೀ ನೆನಪಿಸಿತು ಯೋಗಾ ಕ್ಲಾಸ್
ಬೆಳಗ್ಗೆ : 11:ಗಂಟೆ
ನೆನ್ನೆಯ ದುಗುಡದಿಂದ ರುಚಿಯಾಗಿಲ್ಲ
ಬಣ್ಣದ ವಾಸನೆ ಹಾಗೇ ಇದೆ
ಬಿಳಿಯ ಕಪ್ ನಲ್ಲಿ ಬಿಸಿ ಹೊಗೆ...
ನಿರ್ಲಿಪ್ತತೆಯ ಮಸಾಲಾ ಟೀ
ಮಧ್ಯಾಹ್ನ : 3 ಗಂಟೆ
ಮಳೆಹನಿಗಳಲ್ಲಿ ತೊಯ್ಯುತ್ತಾ
ಹೃದಯವ ತಟ್ಟಿದ ವಾಟ್ಸ್ ಅಪ್
ಮೆಸೇಜು ಆನಂದದಲ್ಲಿ
ಶುಂಠಿಯ ಪರಿಮಳದಲ್ಲಿ ಕಮ್ಮನೆಯ
ಚಾ....
ಪಿಂಗಾಣಿ ಬಟ್ಟಲಲ್ಲಿ ಉತ್ಸಾಹ
ಗಂಟಲಿಗಿಳಿಯಿತು ಬಿಸಿ.. ಬಿಸಿಯಾಗಿ
ಸಂಜೆ : 6 ಗಂಟೆ
ಗೆಳೆಯನ ಕೈಲಿ
ಗುಲಾಬಿ ಅರಳಿದ ಶ್ವೇತ ರಂಗಿನ
ಕಪ್ ಸಾಸರ್ ನಲ್ಲಿ ಟೀ...
ಹೇಗಿದೆ ಸ್ವಾದ ರುಚಿ ?
ನಿನ್ನಷ್ಟೇ ಸುಂದರವಾಗಿ ಉತ್ತರದಲ್ಲಿ
ಗುಲಾಬಿಗಳ ಗುಲ್ದಾಸ್ತಾ
ಪಡೆದುಕೊಂಡಿತು
ರಾತ್ರಿ ಹನ್ನೆರಡು..
ನಿದ್ದೆಯೇ ಬಾರದ ಕಂಗಳ ಮೇಲೆ
ಎವೆಗಳ ಬೀಸಣಿಗೆಗೆ ಕೇಳಿಸದ
ಗಡಿಯಾರ
ಮುಚ್ಚಿದ ಬಾಗಿಲ ಹಿಂದೆ
ಹೆಪ್ಪುಗಟ್ಟಿದ ಸಂತಸದ ಸಮಯ
ಶುಂಠಿ ಮೆಣಸು ಪುದೀನಾ ಟೀ
ಯೋಚನೆಗೆ ಬಿದ್ದಿದ್ದಾಗ
ಗಂಟಲುದಾಟಿ ಅದು ಯಾವಾಗ
ಹೊರಟಿತೋ....
ನೀಲಿ ರಂಗಿನ ಮಗ್ ಅನ್ನು
ಕೈಗಳು ಯಾವಾಗ ಟೀಪಾಯ್ ಮೇಲಿ
ರಿಸಿದವೋ....
ಹಾಲಿನ ಪ್ಯಾಕೆಟ್ ಹುಡುಗನ ಬೆಲ್ಲು
ಕಿರುಲಿತು ಗಿಣಿಯಂತೆ
No comments:
Post a Comment