Thursday, 2 July 2020

telugu poem : Renuka Ayola kannada translation : S D Kumar ತೆಲುಗು : ರೇಣುಕಾ ಅಯೋಲಾ ಕನ್ನಡಕ್ಕೆ : ಎಸ್ ಡಿ ಕುಮಾರ್


telugu poem : Renuka Ayola
kannada translation : S D Kumar

ತೆಲುಗು : ರೇಣುಕಾ ಅಯೋಲಾ
ಕನ್ನಡಕ್ಕೆ : ಎಸ್ ಡಿ ಕುಮಾರ್

ಈ ನಿರ್ಬಂಧ ಕೆಲವೇ ದಿನಗಳು ಮಾತ್ರ

ನನ್ನ ಬೆಳಗನ್ನು ನೇರ ನೋಡಲಾಗದವರು
ಗೋಡೆಗಳ ಹೆಚ್ಚಿಸಿ ಕಾವಳ ಮೂಡಿಸಿದವರು
ಕಂಗಳಲ್ಲಿ ಬೆಳಕಿನ ಪತ್ತಲು ಇಲ್ಲದವರು
ಗಂಟಲದುಮುವ ಹಾದಿಯನ್ನೇ ಆಸರೆ
ಯಾಗಿಸಿಕೊಂಡವರು
ಸುಳ್ಳೇಸುಳ್ಳು ಧರ್ಮವ ಹೊರುತ್ತಿರುವವರು
ನನ್ನ ತಿರಸ್ಕಾರಕ್ಕೆ ಮುಖಾಮುಖಿಯಾಗಿ
ನಿಲ್ಲಲಾಗದವರು

ಅವರ ಇರುಳು ರಾತ್ರಿಗಳಲ್ಲಿ... 
ಯಾವುದೋ ಒಂದು ದೀಪವ ಬೆಳಗಿಸಲಿ

ನಂಬಿಕೆ ದ್ರೋಹದ ಕತ್ತಿಗಳಿಂದ
ಸ್ವೇಛ್ಚಾ ಗಂಟಲು ಒತ್ತಿಬಿಡುವ
ರುಂಡಗಳ ಬೆದಕಾಡುವವರಿಗೆ
ನನ್ನ ಧೈರ್ಯಕ್ಕೆ ಕೊಡಲಿಪೆಟ್ಟು ಹಾಕೋದು
ಸುಲಭವಲ್ಲ - ಅಷ್ಟಾಗಿ

ಬದುಕುವೆ ನಾನು ನನ್ನ ದೇಶದಲ್ಲೇ
ಪ್ರವಾಸಿಯಾಗಿ
ಈ ದೌರ್ಜನ್ಯ ಇದೆಯಲ್ಲ ಇದು
ಟೆಂಪೊರರಿ ಅತಿಥಿ
ಅನಾಮಿಕವಾದ ಸೇಡು ಸೆಡವುಗಳ
ಕಾಟ
ನನ್ನನ್ನೇನು ಮಾಡುತ್ತವೆ ಅಪರಿಚಿತ ಹಸ್ತಗಳು

ನನ್ನ ಸ್ವೇಛ್ಚೆಯನ್ನು ಚೆಲುವನ್ನು ಅಮರುವ
ಧೂಳೊಳಗಿಂದ.. 
ನನ್ನ ಪ್ರಿಯ ಕವಿಗಳ ಗಂಟಲ ಪದ್ಯಗಳು
ಕೇಳಿಸುತ್ತಲೇ ಇರುತ್ವೆ ನನಗೆ

ಈ ನಿರ್ಬಂಧ ಇನ್ನು ಕೆಲವೇ ದಿನಗಳು
ಮಾತ್ರ
Show quoted text

No comments:

Post a Comment